Thursday, March 6, 2014

ಪ್ರೀತಿ

          


          ಪ್ರೀತಿ ಅನ್ನೋದು ಒಂದು ಪವಿತ್ರವಾದ ಸಂಭಂದ. ಎರಡು ಹೃದಯಗಳ ಸಂಮಿಲನ. ಆದರೆ ಕೆಲವರ ಪಾಲಿಗೆ ಪ್ರೀತಿ ಹುಚ್ಚು, ಕೆಲವರಿಗೆ ಬದುಕು, ಕೆಲವರಿಗೆ ಉಸಿರು, ಕೆಲವರಿಗೆ ನೋವು, ಇನ್ನು ಕೆಲವರಿಗೆ ಮಾಯೆ. ಕೆಲ ಹುಡುಗರಿಗೆ ಪ್ರೀತಿ ತಮಾಷೆ ಇದ್ದಂತೆ, ಕೆಲ ಹುಡುಗಿಯರಿಗೆ ಹುಡುಗನ ಬೈಕಿನ ಮೇಲೆ ಹೋಗುವ ಒಂದು ಜಾಲಿ ರೈಡು. ಗುಲಾಬಿ ಹೂವು, ಟೆಡ್ಡಿ ಬೇರು, ಚಾಕ್ಲೇಟು, ಕೈಗೊಂದು ಮೊಬೈಲು, ಆರ್ಚೀಸ್ ಗ್ರೀಟಿಂಗ್ ಕಾರ್ಡುಗಳೆಲ್ಲ ಇರಬೇಕು, ಅದೇ ಪ್ರೀತಿ ಕೆಲವರಿಗೆ. ಅದೆಲ್ಲ ನಿಜವಾದ ಪ್ರೀತಿ ಅಲ್ಲ. ಮನದ ಮಾತು ಕಾಣದ ಹೃದಯಕ್ಕೆ ತುಲುಪುವ ಸಂದೇಶವೇ ಪ್ರೇಮ. ಎರಡು ಹೃದಯಗಳ ನಡುವಿನ ಭಾವನಾತ್ಮಕ ಸಂಭದವೇ ಪ್ರೇಮ. ನಂಬಿದವರಿಗೆ ಅದೇ ಬದುಕು. ಆ ಬದುಕಿನಲ್ಲಿ ಸಾಗಿದವರಿಗೆ ಪ್ರೀತಿ ಎಂದೂ ಹೊಸದಾಗಿಯೇ ಕಾಣುತ್ತದೆ. ಅದೇ ಆಕರ್ಷಣೆ, ಅದೇ ನಗು, ಅದೇ ಪ್ರೀತಿ, ಅದೇ ಹೊಸತನ ಎಂದೆಂದಿಗೂ ಇರುತ್ತದೆ. ನಿಜವಾದ ಪ್ರೀತಿಯೇ ಹಾಗೆ. ಅದಕ್ಕೆ ನಿಜವಾದ ಪ್ರೇಮಿಗಲಾಗಿರೋಣ ಹೊಸ ಪ್ರೀತಿಯೊಂದಿಗೆ ಬದುಕು ಸಾಗಿಸೋಣ. ಅಂತಹ ಪ್ರೀತಿಯಿಂದ ಬಾಳಾಗಲಿ ನವನೀತ. 

No comments:

Post a Comment