ನೆನಪುಗಳ ಮಾತೆ ಮಧುರ...
ನೆನಪುಗಳ ಮಾತೆ ಮಧುರ... ಮನಸ್ಸಿನಲ್ಲಿ ಪಿಸುಗುದುತ್ತಿರುವ ನನ್ನಿಯನ ನೆನಪಲ್ಲದೆ ಮತ್ತೇನು ಇಲ್ಲ ಈ ಹೃದಯದಲ್ಲಿ. ಆ ನೆನಪುಗಳ ಮಳಿಗೆಯಲ್ಲಿ ಇರುವುದು ಅವನೆ. ಅವನನ್ನು ಬಿಟ್ಟು ಮತ್ತೇನೂ ಇಲ್ಲ.
ಒಂದು ವರ್ಷದ ಕೆಳಗೆ ನಮ್ಮಿಬ್ಬರ ಪರಿಚಯವಾಯಿತು. ಪರಿಚಯದಿಂದ ಸ್ನೇಹ, ಸ್ನೇಹದಿಂದ ಪ್ರೀತಿಯಾಗಿ ಪರಿವರ್ತನೆಯಾಯಿತು. ಅವನಲ್ಲಿದ್ದ ಯಾವುದೋ ಒಂದು ಸೆಳೆತ ನನ್ನನ್ನು ಬಲವಾಗಿ ಆಕರ್ಷಿಸಿತ್ತು. ನಾನು ಸಂಪೂರ್ಣವಾಗಿ ನನ್ನನ್ನು ಅವನಿಗೆ ಅರ್ಪಿಸಿಕೊಂಡಿದ್ದೆ. ಈಗಿರುವಾಗ ಒಂದು ದಿನ ಪ್ರಶಾಂತವಾಗಿದ್ದ ನಮ್ಮಿಬ್ಬರ ನಡುವೆ ಬಿರುಗಾಳಿಯಂತೆ ಕೆಲಸದ ಅವಕಾಶವೊಂದು ಅವನನ್ನು ಹುಡುಕಿಕೊಂಡು ಬಂದಿತು. ಆ ಕೆಲಸಕ್ಕಾಗಿ ಅವನು ದೂರದ ದೆಹಲಿಗೆ ತೆರಳಿದ್ದಾನೆ ಅವನಿಲ್ಲದೆ ನಾನು ನಿರ್ಜೀವ ಬೊಂಬೆಯಂತಿದ್ದೀನಿ. ಅವನ ನೆನಪುಗಳನ್ನೇ ಮೆಲುಕು ಹಾಕುತ್ತಾ ಅವನ ಆಗಮನದ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ.
ಅದೇಕೋ ಆ ದೇವರಿಗೆ ನಮ್ಮ ಮೇಲೆ ಇನ್ನೂ ಕರುಣೆ ಬಂದಿಲ್ಲ. ಅವನು ಯಾವಾಗ ಊರಿಗೆ ಹಿಂದಿರುಗುತ್ತಾನೋ? ಯಾವಾಗ ನನ್ನನ್ನು ಲಘ್ನವಾಗುತ್ತಾನೋ? ಯಾವುದು ತಿಳಿಯದೆ ಆತಂಕದಲ್ಲೇ ಬದುಕು ಸಾಗುತ್ತಿದೆ. ಅವನು ಹಿಂದಿರುಗಿ ಬರುವ ತನಕ ಅವನ ಜೊತೆ ಕಳೆದ ನೆನಪುಗಳೇ ನನ್ನ ಸಂಗಾತಿ. ಆ ನೆನಪುಗಳೊಂದಿಗೆ ನನ್ನ ಜೀವನ ಸಾಗುತ್ತಿದೆ. ಆ ನೆನಪುಗಳೇ ಅತಿ ಮಧುರವಾಗಿ ನನ್ನನ್ನು ಸಂತೈಸುತ್ತಿದೆ.
-ಜಿ.ಕೆ.
-ಜಿ.ಕೆ.
No comments:
Post a Comment