Wednesday, June 11, 2014

Short Love Story

ಮಧುರವಾದ ಪ್ರೇಮ 


     ನಾವೆಲ್ಲರು ಒಂದೇ ಕಾಲೇಜು. ಒಂದೇ ಕ್ಲಾಸು. ಯಾವಾಗಲೂ ಜೊತೆಯಾಗಿ ಇರುತ್ತಿದ್ದೆವು. ಕೆಲವು ಬಾರಿ ಸುಮ ಮಾತ್ರ ನನ್ನೊಟ್ಟಿಗೆ ಇರುತ್ತಿದ್ದಳು. ಉಳಿದವರು ಎಲ್ಲಾ ಹೋದರು ಅವಳು ಮಾತ್ರ ನನ್ನೊಂದಿಗೆ ಸ್ವಲ್ಪ ಕಾಲ ಹೆಚ್ಚಾಗಿ ಕಳೆದು ನಂತರ ಗೂಡು ಸೇರುತ್ತಿದ್ದಳು.

     ನಮ್ಮ ಕೋರ್ಸು ಕಂಪ್ಲೀಟ್ ಆಗುವ ಸಮಯ ಬಂದಿತ್ತು. ಎಲ್ಲರೂ ಒಲ್ಲದ ಮನಸ್ಸಿನಿಂದ ಪರಸ್ಪರ ಬೀಳ್ಕೊಟ್ಟೆವು. ಯಾಕೋ ಏನೋ? ಸುಮ ಆ ದಿನ ನನ್ನನ್ನು ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದಳು. ನಾನು ಯಾಕೆ ಸೂಮ? ಹಾಗೆ ನೂಡುತ್ತಿದ್ದೀಯ? ಎಂದು ಕೇಳಿದೆ. ಅದಕ್ಕೆ ಅವಳು ನೀನು ಏನಾದರೂ ಹೇಳುವುದಿದೆಯಾ ಎಂದಳು?

     ಇಲ್ಲ! ಏನು ಹೇಳಬೇಕು? ಎಂದು ಮರು ಪ್ರಶ್ನೆ ಮಾಡಿದೆ. ಏನಿಲ್ಲ ಬಿಡು. ಎಂದು ಅಲ್ಲಿಂದ ತೆರಳಿದಳು. ಅವಳು ಹೋದ ಮರು ಕ್ಷಣದಿಂದ ಹೃದಯ ಬಲು ಭಾರ ಎನ್ನಿಸ ತೊಡಗಿತು. ಏನನ್ನೋ ಕಳೆದುಕೊಂಡ ಭಾವನೆ. ಮನಸ್ಸಿಗೆ ಮಂಕು ಕವಿದ ಹಾಗಿತ್ತು. ಜೀವನವೇ ಬೇಸರವಾಗಿ ಎಲ್ಲಾದರೂ ದೂರ ಹೋಗಿ ಬರೋಣ ಎನಿಸುತ್ತಿತ್ತು.

     ಹೀಗಿರುವಾಗ ಒಂದು ದಿನ ಸುಮ ಬಸ್ ಸ್ಟಾಪ್ನಲ್ಲಿ ಸಿಕ್ಕಿದಳು. ಅವಳನ್ನು ಕಂಡ ಕೂಡಲೇ ಹೃದಯದ ಬಡಿತ ಹೆಚ್ಚಾಗ ತೊಡಗಿತು. ಕಳೆದುಕೊಂಡಿದ್ದನ್ನೆಲ್ಲಾ ಪುನಹ ಪಡೆದಂತೆ ಭಾಸವಾಯಿತು. ಎಂದೂ ಕೇಳಿರದ ಧನಿಯೊಂದು ಎದೆಯಲ್ಲಿ ಝೇಂಕರಿಸಿದ ಅನುಭವ. ಆಗಲೇ ನೋಡಿ ತಿಳಿದದ್ದು ನಾನು ಅವಳನ್ನು ಮನಸಾರೆ ಪ್ರೀತಿಸುತ್ತಿದ್ದೆ ಎಂಬ ವಿಷಯ.

     ನನೋಳಗಡೆ ಅಡಗಿದ್ದ ಪ್ರೀತಿ ಘೋಚರಿಸುವುದಕ್ಕೆ ಇಷ್ಟು ಕಾಲ ಬೇಕಿತ್ತು. ಅವಳಾದರೂ ಹೇಳ ಬಹುದಿತ್ತು. ಹೆಣ್ಣು ಜೀವ ಹೇಗೆ ಧೈರ್ಯ ಮಾಡಿಯಾಳು? ಎಂದು ಯೋಚಿಸಿ ನಾನೇ ಹೇಳಿ ಬಿಟ್ಟೆ. ಹೇಳಿದ ಕೂಡಲೆ ಅವಳಲ್ಲಿ ಎಂದೂ ನೋಡಿರದ ನಾಚಿಕೆಯನ್ನು ಕಂಡು ಅವಳು ಸಮ್ಮತಿಸಿರುವುದಾಗಿ ತಿಳಿಯಿತು. ಅಂದಿನಿಂದ ಆರಂಭವಾಯಿತು ನೋಡಿ ನಮ್ಮಿಬ್ಬರ ಮಧುರವಾದ ಪ್ರೇಮ.      
                                                                                                                               -ಜಿ.ಕೆ. 

No comments:

Post a Comment