ಅಂದುಕೊಂಡಷ್ಟು ಕೆಲಸ ಸುಲಭವಾಗಿರಲಿಲ್ಲ. ಆದರೆ ಉದ್ದೇಶ ಮಾತ್ರ ಸ್ಪಷ್ಟವಾಗಿತ್ತು. ೪೦೦ ಕುಟುಂಬಗಳ ೧೪೦೦ ಜನರನ್ನು ಸ್ಥಳಾಂತರಿಸಬೇಕಾಯಿತು. ೩೧೪ ಮನೆಗಳನ್ನು ಖರೀದಿಸಬೇಕಾಯಿತು....
ಅಲ್ಲಿಯ ಒಂದು ಆಸ್ತಿಗೆ ನೂರಾರು ಮಾಲೀಕರು!
ಅದನ್ನು ಬಾಡಿಗೆಗೆ ನೀಡಿದ್ದವರು, ಅದನ್ನು ಪುನಃ ಒಳಬಾಡಿಗೆಗೆ ನೀಡಿದವರು, ಲೀಸ್‌ಗೆ ತೆಗೆದುಕೊಂಡವರು, ಈ ನಡುವೆ ಚುಚ್ಚಿಕೊಡುವವರ ಮಾತು ಕೇಳಿಕೊಂಡು ಕಾನೂನು ಮೊರೆ ಹೋಗುವ ಬೆದರಿಕೆ ಹಾಕಿದವರು, ಉದ್ದೇಶಪೂರ್ವಕವಾಗಿ ಅನಗತ್ಯ ಅಡಚಣೆ ಮಾಡಲು ಸಜ್ಜಾದವರು - ಒಂದಾ ಎರಡಾ ನೂರಾರು!
ಕಾನೂನು ತಂತ್ರಗಳನ್ನು ತಪ್ಪಿಸಿ, ಅವರ ಮನವೊಲಿಸಿ, ಸೂಕ್ತ ಪರಿಹಾರನೀಡಿ, ನಿಜಕ್ಕೂ ಅಗತ್ಯವಿದ್ದವರಿಗೆ ಬೇರೆಡೆ ಮನೆಗಳನ್ನು ಕಟ್ಟಿಕೊಡುವುದರಿಂದ ಹಿಡಿದು ಎಲ್ಲವನ್ನೂ ಸುಗಮವಾಗಿ ನಿಭಾಯಿಸಿದ ಅಂಶದಿಂದ ಸಂಕೀರ್ಣತೆಯನ್ನು ಅಳೆಯಬಹುದು.
ಅನಂತರ ಕೆಡವಲ್ಪಟ್ಟ ಮನೆಗಳಿಂದ, ಸುಮಾರು ೪೦ ಪುರಾತನ ದೇವಾಲಯಗಳು ಕಂಡುಬಂದವು..! ಅವುಗಳಿಗೂ ಸಹ ಸೂಕ್ತ ಸ್ಥಳ ಒದಗಿಸಲಾಯಿತು. ಕಾಶಿ ವಿಶ್ವನಾಥನ ಸಂಕೀರ್ಣವು ೨೦೦೦ ಚದರ ಮೀಟರ್‌ನಿಂದ ಈಗ ೫೨ ಸಾವಿರ ಚದರ ಮೀಟರ್‌ಗೆ ಹೆಚ್ಚಾಗಿದೆ....!!
ಹರಹರ ಮಹಾದೇವ ನಮೋ ಕಾಶಿ ವಿಶ್ವನಾಥ
ಇದು ಮೋದಿಯ ನವಭಾರತ...
ಅತ್ತ ಕಾಶಿಯಲ್ಲಿ ಮೋದಿಜಿ ಪೂಜೆ ಮಾಡುವಾಗ, ಇತ್ತ ೧೨ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ರಾಷ್ಟ್ರದ ಗಣ್ಯರಿಂದ ಏಕಕಾಲದಲ್ಲಿ ಪೂಜೆ...
ಅತ್ತ ಕಾಶಿಯಲ್ಲಿ ಪ್ರಧಾನಿ ಮೋದಿಯವರು ಕಾಶಿ ವಿಶ್ವನಾಥನಿಗೆ ಪೂಜೆ ನೆರವೇರಿಸುತ್ತಿದ್ದರೆ, ಇತ್ತ ಅದೇ ಸಮಯದಲ್ಲಿ ಗೃಹಸಚಿವ ಅಮಿತ್ ಶಾ ರವರು ಗುಜರಾತಿನ ಸೋಮನಾಥನಿಗೆ ಪೂಜೆ ನೆರವೇರಿಸಿದರು. ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಪೂಜೆ ಮಾಡಿದರು. ಇನ್ನು ಮಧ್ಯಪ್ರದೇಶದ ಉಜ್ಜಯನಿಯ ಮಹಾಕಾಳೇಶ್ವರನಿಗೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮಧ್ಯಪ್ರದೇಶದ ಕ್ವಾಂಡ್ವಾದಲ್ಲಿ ಓಂಕಾರೇಶ್ವರನಿಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಜಾರ್ಖಂಡ್‌ನ ದೇವಘಡದಲ್ಲಿ ವೈದ್ಯನಾಥನಿಗೆ ಸಚಿವ ಅರ್ಜುನ್ ಮುಂಡಾ, ಮಹಾರಾಷ್ಟ್ರದ ಭೀಮಾಶಂಕರದಲ್ಲಿ ಸಚಿವ ನಾರಾಯಣ ರಾಣೆ, ಔರಂಗಾಬಾದ್‌ನಲ್ಲಿ ಘೃಷ್ಮೇಶ್ವರನಿಗೆ ಸಚಿವ ನಿತಿನ್ ಗಡ್ಕರಿ, ನಾಸಿಕ್‌ನ ತ್ರಯಂಬಕೇಶ್ವರದಲ್ಲಿ ಸಚಿವ ಪಿಯುಷ್ ಗೊಯಲ್, ತಮಿಳುನಾಡಿನ ರಾಮೇಶ್ವರನಿಗೆ ಸಚಿವ ಎಲ್ ಮುರುಗನ್, ಗುಜರಾತಿನ ದ್ವಾರಕಾದ ನಾಗೇಶ್ವರನಿಗೆ ಸಿಎಂ ಭೂಪೇಂದ್ರ ಪಟೇಲ್, ಕೇದಾರನಾಥನಿಗೆ ಉತ್ತರಖಂಡದ ಸಿಎಂ ಪುಷ್ಕರ ಸಿಂಗ್ ಧಮನಿ ವಿಶೇಷ ಪೂಜೆ ಸಲ್ಲಿಸಿದರು. ಐತಿಹಾಸಿಕ ಕ್ಷಣದಲ್ಲಿ ದೇಶದ ೧೨ ದ್ವಾದಶ ಪವಿತ್ರ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ರಾಷ್ಟ್ರದ ಕಲ್ಯಾಣಕ್ಕಾಗಿ ಬಿಜೆಪಿ ನಾಯಕರು ಪೂಜೆ ನೆರವೇರಿಸಿದರು..
ಧನ್ಯ ಭಾರತ...
No comments:
Post a Comment