ಜೀವನ ಅತ್ಯಂತ ಸುಗಮ ಏನಿಸುವುದು ಬಾಲ್ಯದಲ್ಲೇ. ಗೌಪ್ಯತೆಯೇ ಇಲ್ಲದ ಸುಮಧುರ ಜೀವನ ಅದು. ದ್ವೇಷ, ಅಸೂಹೆಗಳ ಅಂಗಿಲ್ಲದೆ, ಜಾತಿ ಮತಗಳ ಭೇದವಿಲ್ಲದೆ ಸಮಾನತೆಯ ಬದುಕನ್ನು ಸಾರುವ ಒಂದು ಅಭೂತಪೂರ್ಣ ಚಿತ್ರಣ. ಮೊಗ್ಗಿನ ಮನಸ್ಸುಗಳಲ್ಲಿ ಅರಳುವ ಸುಮಧುರ ಕನಸ್ಸುಗಳು ನಾಳೆಯ ಚಿಂತೆ ಇಲ್ಲದೆ, ಅಂದಿನ ಚಟುವಟಿಕೆಯೊಂದಿಗೆ ಸಾಗುವ ಆ ಬದುಕು ಅತಿ ಸರಳ, ಬಹು ಸುಂದರ.
ಇಂತಹ ಬಾಲ್ಯದ ನೆನಪುಗಳನ್ನು ಎಲ್ಲರೂ ಸಹ ತಮ್ಮ ನಿತ್ಯ ಜೀವನದಲ್ಲಿ ಆಗಾಗ ಮೆಲುಕು ಹಾಕುತ್ತಾರೆ. ಆ ಸವಿ ನೆನಪುಗಳು ಜೀವನದುದ್ದಕ್ಕೂ ಸನಿಹದಲ್ಲಿರುತ್ತದೆ. ಅದನ್ನು ಮರೆಯಲು ಹೀಗೆ ಸಾಧ್ಯ? ನೀವೆ ಯೋಚಿಸಿ.
ಕೆಲವರ ಪಾಲಿಗೆ ಅವರ ಬಾಲ್ಯ ಬಹಳ ಬೇಸರ ತನ್ದಿರುತ್ತದೆ. ಅವರ ಪಾಲಿಗೆ ಅದೊಂದು ಮರೆಯಲಾಗದ ಸಂಗತಿ. ಅವರ ಪಾಲಿಗೆ ಆ ನೆನಪುಗಳು ಜೀವದ ಅವಿಭಾಜ್ಯ ಅಂಗವಾಗಿರುತ್ತದೆ.
ನೀವೆ ಹೇಳಿ? ಆ ದಿನಗಳ ಸವಿ ನೆನಪನ್ನು ವರ್ಣಿಸುತ್ತಾ ಹೋದರೆ ಪದಗಳೇ ಸಾಲುವುದಿಲ್ಲ. ಅಂತಹ ನೆನಪುಗಳು ಯಾರಿಂದಾದರೂ ಮರೀಚಿಕೆಯಾಗಲು ಸಾಧ್ಯವೇ?
ಗೆಳೆಯರೊಂದಿಗೆ ಕಳೆದ ಕ್ಷಣಗಳು, ಆಡಿದ ಮಾತುಗಳು, ಮಾಡಿದ ಕೆಲಸಗಳು, ಊರನ್ನು ಸುತ್ತುತ್ತಿದ್ದ ಸನ್ನಿವೇಶಗಳು, ಆ ತೊದಲ ನುಡಿಯನ್ನು ಮರೆಯಲು ಹೇಗೆ ಸಾಧ್ಯ.
ಜೀವನವನ್ನು ಅತಿ ಸೊಗಸಾಗಿ ಕಳೆಯಬಹುದಾದ ವಯಸ್ಸೆಂದರೆ ಒಂದು ಬಾಲ್ಯ ಮತ್ತೊಂದು ತಾರುಣ್ಯ. ಯೌವನದಲ್ಲಿ ನಮ್ಮ ಬುದ್ಧಿ ಬೆಳೆದಿರುತ್ತದೆ, ನಾವು ಮಾಡುವ ಕೆಲಸಗಳ ಅರಿವಿರುತ್ತದೆ. ಆದರೆ ಬಾಲ್ಯದ ದಿನಗಳಲ್ಲಿ ಬುದ್ಧಿ ಬೆಳೆದಿರುವುದಿಲ್ಲ. ತಿಳಿಯದ ವಯಸ್ಸಿನಲ್ಲಿ ಮಾಡುವ ಚೇಷ್ಟೆ, ತುಂಟಾಟಗಳು, ಅರಿಯದೆ ಮಾಡುವ ಸಣ್ಣ ಸಣ್ಣ ತಪ್ಪುಗಳು, ಹೊಲ ಗದ್ದೆಗಳಲ್ಲಿ ನುಗ್ಗಿ ಹಣ್ಣು, ಕಾಯಿ ಕೀಳುವ ಪ್ರಸಂಗಗಳನ್ನು ಬರಿ ಮಾತಿನಲ್ಲಿ ಹೇಳಲು ಸಾಧ್ಯವೇ ಹೇಳಿ?
ನಿಜಕ್ಕೂ ಬಾಲ್ಯದ ಜೀವನ ಕನಸ್ಸು ಮನಸ್ಸುಗಳ ಚಿತ್ತಾರವೇ ಸರಿ. ಈ ಸುಂದರ ಸಂಚಿಕೆಯಲ್ಲಿ ನಾವೆಲ್ಲರೂ ಬಾಲ್ಯವೆಂಬ ನೆಚ್ಚಿನ ಸಂಗಾತಿಯೊಂದಿಗೆ ಕಳೆದ ಮಧುರ ಕ್ಷಣಗಳ ಮೆಲುಕು ಹಾಕೋಣ.
- ಜಿ.ಕೆ.
No comments:
Post a Comment