Wednesday, February 26, 2014

ಶಿವರಾತ್ರಿ ವಿಶೀಷ

     ಸಾಮಾನ್ಯವಾಗಿ ನಮ್ಮಲ್ಲಿ ಎಲ್ಲ ದೇವಾನುದೇವತೆಗಳ ಪೂಜಾ ಕೈಂಕರ್ಯಗಳು ಹಗಲಿನಲ್ಲಿ ನಡೆಯುತ್ತವೆ. ಆದರೆ ಮಹಾ ಶಿವರಾತ್ರಿಯಂದು ಶಿವ ಪೂಜೆ ರಾತ್ರಿಯವೇಳೆ ಆಚರಿಸಲ್ಪಡುತ್ತದೆ. ಆ ದಿನ ಭಕ್ತರು ಪುಣ್ಯ ತೀರ್ಥಗಳಲ್ಲಿ ಮಿಂದು ಉಪವಾಸ ಮಾಡಿ ಬಿಲ್ವ ಪತ್ರೆಗಳಿಂದ ಅರ್ಚಿಸಿ ಭಕ್ತಿ ಭಾವಗಳಿಂದ ಜಾಗರಣೆ ಮಾಡಿ ಶಿವನನ್ನು ಸ್ತುತಿಸಿ ಭಜನೆ ಮಾಡಿ ಹರಕೀರ್ತನೆ ಗಳನ್ನು ಕೇಳಿ ಪಾವನ ರಾಗುತ್ತಾರೆ. ಶಿವರಾತ್ರಿ ಪೂಜೆ ರಾತ್ರಿ ಕಾಲವೆ ಪ್ರಶಸ್ತವೇಕೆಂದರೆ ಶಿವನು   ತಾನು ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿ ಯಂದು ರಾತ್ರಿ ಸಮಯದಲ್ಲಿ ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತೇನೆ  ಎಂದಿದ್ದಾನೆ. ಕಾರಣ ಶಿವರಾತ್ರಿ ದಿನದಂದು ರಾತ್ರಿಯ ವೇಳೆಯಲ್ಲಿ ತನ್ನನ್ನು ಪೂಜಿಸಿದವರ ಪಾಪಗಳು ಪರಿಮಾರ್ಜನೆಯಾಗುತ್ತವೆ ಎಂದು ಸಾರಿದ್ದಾನೆ ಎಂಬ ಬಗ್ಗೆ ಶಾಸ್ತ್ರೋಕ್ತಿ ಯೊಂದಿದೆ.  ಸ್ಕಂದ ಪುರಾಣ  ದಲ್ಲಿ ಶಿವರಾತ್ರಿ ಹಬ್ಬದಂದು ವೃತ ಪೂಜೆಗೆ ಸಂಮ್ಮಂಧ ಪಟ್ಟಂತೆ ಇರುವ ಉಕ್ತಿಯೊಂದರಲ್ಲಿ ' ಶಿವರಾತ್ರಿಯು ಮಹಾ ಶಿವರಾತ್ರಿ ಏಕೆಂದರೆ ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವಿರುವ ಪರ್ವಕಾಲ ಪೂಜೆಗೆ ಪ್ರಶಸ್ತ.' ರಾತ್ರಿಯ ವೇಳೆ ಯಾವ  ಸಮಯ ವೆಂದರೆ ಚತುರ್ದಶಿಯು ಪ್ರದೋಷ ಮತ್ತು ರಾತ್ರಿಸ್ತ ಎರಡೂ ಕಾಲ ಗಳನ್ನು ಒಳಗೊಂಡಿರಬೇಕು.. ತ್ರಯೋದಶಿಯು ಶಕ್ತಿರೂಪವಾದರೆ ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ. ' ಶಿವ ಪುರಾಣ ' ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆಯಿರಲಿ, ' ಸ್ಕಂದ ಪುರಾಣ 'ದ ಬೇಡ ಚಂದನನ ಕಥೆಯಿರಲಿ, ' ಗರುಡ ಮತ್ತು ಅಗ್ನಿ ಪುರಾಣ ' ಗಳ ಬೇಡ ಸುಂದರ ಸೇನನ ಕಥೆಯಿರಲಿ ಎಲ್ಲ ಕಥೆಗಳ ಸಾರಾಂಶ ಒಂದೆ. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರಿಗೆ ಸದ್ಗತಿ ಪ್ರಾಪ್ತವಾಯಿತು.  ಅವರುಗಳು ತಿಳಿಯದೆ ಪೂಜೆ ಅಭಿಷೇಕ ಮಾಡಿದ್ದರೂ ಅವರಿಗೆ ಶಿವ ಮುಕ್ತಿಯನ್ನು ಕರುಣಿ ಸಿರಬೇಕಾದರೆ ತಿಳಿದ ನಾವು ಭಕ್ತಿ ಪೂರ್ವಕ ವಾಗಿ ಶಿವರಾತ್ರಿಯಂದು ಶಿವಪೂಜೆ ಮಾಡಿ ಭಕ್ತಿಯಿಂದ ಜಾಗರಣೆ ಮಾಡಿದರೆ ಆ ಶಿವ ನಮಗೂ ಸದ್ಗತಿಯನ್ನು ಕಾಣಿಸದೆ ಇರಲಾರ ಎಂದು ನಂಬಿ ನಾವೂ ಇಲ್ಲಿಯ ವರೆಗೂ  ಮಹಾ ಶಿವರಾತ್ರಿ ಪೂಜೆ  ಯನ್ನು ಆಚರಿಸುತ್ತ ಬಂದಿದ್ದೇವೆ. 
     ವಿಷ್ಣು ಅಲಂಕಾರ ಪ್ರಿಯನಾದರೆ ಶಿವ ಅತ್ಯಂತ ಮಂಗಳ ಕಾರಕ ನಾಮರೂಪಕ ಗುಣ ಕರ್ಮಗಳುಳ್ಳ ಮಹಾದೇವ. ಅಂತಹ ಕರುಣಾ ಮಯಿಯಾದ ಪರಶಿವನಲ್ಲಿ ಮನಃಪೂರ್ವಕವಾಗಿ ಬೇಡಿಕೊಂಡು ಪೂಜಿಸಿದರೆ ಆತನಿಗೆ ತನ್ನ ಭಕ್ತನ ಬಗ್ಗೆಪ್ರೀತಿಯುಂಟಾಗುತ್ತದೆ. ಉಪವಾಸ ವೆಂದರೆ ಭಗವಂತನನ್ನು ನೆನೆಯುತ್ತ ಆತನ ಹತ್ತಿರವಿರುವುದು ಎಂದು ಅರ್ಥ. ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವನನ್ನು ಮಹಾ ಶಿವರಾತ್ರಿ  ಯಂದು ಧ್ಯಾನಿಸಿದರೆ ಧ್ಯಾನಪ್ರಿಯ ಶಿವ ನಮಗೆ ಸದ್ಗತಿಯನ್ನು ಕರುಣಿಸದೆ ಇರಲಾರ.

     ನಾವು ಭಾರತೀಯರು ವೈಜ್ಞಾನಿಕವಾಗಿ ಎಷ್ಟೆ ಮುಂದುವರಿದಿದ್ದರೂ ಹಬ್ಬ ಹರಿದಿನ ಧರ್ಮ ಕರ್ಮ ಮೋಕ್ಷ ಗಳಲ್ಲಿ ನಂಬಿಕೆ ಇರಿಸಿ ಕೊಂಡಿದ್ದು ಭಕ್ತಿಪುರಸ್ಕಾರವಾಗಿ ಅರ್ಥ ಪೂರ್ಣವಾಗಿ ಆಚರಿಸಿ ನಾವು ಮಾಡಿರ ಬಹುದಾದ ಪಾಪ ಕಾರ್ಯಗಳನ್ನು ಶಿವನಲ್ಲಿ ನಿವೇದಿಸಿಕೊಂಡು ಪಾಪ ಕರ್ಮಗಳನ್ನು ನೀಗಿಕೊಂಡು ಪಶ್ಚಾ ತಾಪದ ಅಗ್ನಿಕುಂಡದಲ್ಲಿ ಅಗ್ನಿಗರ್ಪಿಸಿ ಪುಣ್ಯ ಕಾರ್ಯಗಳಲ್ಲಿ ತೊಡಗಿ ಕೊಳ್ಳಲು ಕಂಕಣ ಬದ್ಧರಾಗೋಣ. ಶಿವನಲ್ಲಿ ರುವ ಸರಳತೆ ತ್ಯಾಗಬುದ್ಧಿ ಕಷ್ಟ ಸಹಿಷ್ಣುತೆ ಜಗಕೆ ತೊಂದರೆ ಬಂದಾಗ ಮುಂದೆ ನಿಲ್ಲುವ, ಪ್ರೀತಿ ಪಾತ್ರರಿಗೆ ವರ ಕೊಡುವ ಉದಾರತನ ಇವು ನಮಗೆ ಆಧರ್ಶಗಳಾಗಲಿ.  ಮಹಾ ಶಿವರಾತ್ರಿ  ಪೂಜೆ ಜಾಗರಣೆಗಳು ಅರ್ಥ ಪೂರ್ಣ ಆಚರಣೆ ಗಳಾಗಲಿ. ಶಿವ ಸ್ಮರಣೆಯ ಪುಣ್ಯ ಕಾಲವನ್ನು ಕ್ರಮ ಬದ್ಧವಾಗಿ ಆಚರಿಸೋಣ. 

No comments:

Post a Comment