Friday, June 20, 2014

A dream of love

ಕನಸುಗಳೇ ಬದುಕು... 

     ಆಗ ಶ್ರಾವಣ ಮಾಸ, ವರ್ಷಧಾರೆಯ ಆರಂಭದ ಕಾಲ. ಆಗ ತಾನೇ ಕಾಲೇಜು ಮುಗಿಸಿ ನೌಕರಿಯ ಹುಡುಕಾಟದಲ್ಲಿದ್ದೆ. ಬರಿ ಕನಸು ಕಾಣುತ್ತಲೇ ಜೀವನವನ್ನು ಸಾಗಿಸಿದವನು ನಾನು. ಕನಸುಗಳೆಂದರೆ ನನಗೆ ಒಂದು ರೀತಿಯ ಸಂತೋಷ. ಅದು ರಾತ್ರಿ ಬೀಳುವ ಕನಸಲ್ಲ, ನನ್ನ ಕಲ್ಪನೆಯಲ್ಲಿ ಅರಳುವ ಕನಸು. ಅದು ಒಂದು ರೀತಿಯ ರೋಮಾಂಚನವಾದದ್ದು. ಒಂದು ಸುಂದರವಾದ ಕಲ್ಪನಾ ಲೋಕದಲ್ಲಿ ವಿಹರಿಸುವ ಅನುಭವ ನನ್ನದೇ ಆದ ಪ್ರಪಂಚದಲ್ಲಿ ನಾನು ಕಟ್ಟಿದ ಕನಸಿನ ಲೋಕ. ಆದರೆ ಅಂದುಕೊಂಡ ಹಾಗೆ ನಡೆಯುತ್ತದೆಯೇ? ಯೋಚಿಸಿದ ಜೀವನವೇ ಬೇರೆ, ಬಯಸಿದ  ಜೀವನವೇ ಬೇರೆ. ಆದರು ಕನಸು ಕಾಣುವುದೇ ನನ್ನ ಬದುಕಾಗಿತ್ತು. ಹದಿ ಹರೆಯದ ವಯಸ್ಸಿನಲ್ಲಿ ನೌಕರಿಯ ಜಿಂತೆ ಭಾದಿಸುತ್ತಿದ್ದರು ಬಾಳ ಸಂಗಾತಿಯ ಕಲ್ಪನೆಯೇ ಹೆಚ್ಚಾಗಿತ್ತು.

     ಏನೇನೋ ಬಯಕೆ, ಕಲ್ಪನೆ. ಮನಸಿನಲ್ಲಿ ಹೊಸದೊಂದು ಅನುಭವ. ವರ್ಣರಂಜಿತವಾದ ವಿಸ್ಮಯ ಎನ್ನಬಹುದು. ಎರಡು ಮನಸು, ದೇಹಗಳನ್ನು ಒಂದು ಗೂಡಿಸುವ ಸಮಯ. ಪರಸ್ಪರ ಹೊಂದಾವಣಿಕೆಯ ಮೇಲೆ ಜೀವನ ಸಾಗಿಸುವ ಪರಿಯೇ ವಿವಾಹದ ಸಂಕೇತ. ಅಂತಹ ಸುಸಂದರ್ಭ ನನ್ನ ಬದುಕಿನಲ್ಲಿ ಈಗ ಬರುತ್ತಿದೆ ಎನ್ನುವ ಕಾತುರ. ಮನೆಯವರು  ಬಲವಂತವಾಗಿ ನೌಕರಿಗೂ ಮುನ್ನವೇ ಹೆಣ್ಣು ನೋಡಲು ಕರೆದುಕೊಂಡು ಹೋದರು. 

     ಅಲ್ಲೇ ನೋಡಿ ಮೊದಲ ನೋಟಕ್ಕೆ ನನ್ನ ಮನಸ್ಸನ್ನು ಅವಳಿಗೆ ಅರ್ಪಿಸಿಬಿಟ್ಟೆ. ಮುಂಗುರುಳ ಅಂಚಲ್ಲಿ ನಾಚಿಕೆಯಿಂದ ನನ್ನತ್ತ ನೋಡಿದಾಗ ಪ್ರೀತಿಯ ಮಧುರವಾದ ಸಿಂಚನ ಎದೆಗೆ ಬಡಿದಂತಾಯಿತು. ಮಲ್ಲಿಗೆ ಮುಡಿದು ಮನಸ್ಸನ್ನು ಸೆಳೆದಳು. ಕಿರುನಗೆ ಬೀರಿ ನನ್ನನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟಳು. 

     ನನ್ನ ಕಲ್ಪನೆಯ ಹುಡುಗಿ, ನನ್ನ ಬಾಳ ಸಂಗಾತಿಯಾಗಿ ಹೇಗಿರಬೇಕು ಎಂದುಕೊಂಡಿದ್ದೆನೋ ಹಾಗೆ... ಹಾಗೆಯೇ ಇದ್ದಳು. ಅವಳ ಆಲಿಂಗನದಲ್ಲಿ ಮಧುರವಾದ ಅಪ್ಪುಗೆಯಲ್ಲಿ ನಾನು ಸಂಪೂರ್ಣವಾಗಿ ಬಂಧಿಯಾಗಿ ಹೋಗಿದ್ದೆ. 

     ನಾನು ಕಂಡ ಕನಸುಗಳಲ್ಲೆಲ್ಲಾ ನನಸಾಗಿದ್ದ ಒಂದೇ ಒಂದು ಕನಸೆಂದರೆ ಅದು ಅವಳೆ.  ಈ ಜೀವಕ್ಕೆ ಆಸರೆಯಾಗಿ ಬಂದವಳು. ಮನಸ್ಸನ್ನು ತುಂಬಿ ಬದುಕಿಗೆ ಬೆಳಕಾದವಳು. ಅವಳನ್ನು ವಿವಾಹವಾಗುತ್ತಲೇ ದೊಡ್ಡ ಹುದ್ದೆಯೊಂದು ನನಗೆ ದೊರಕಿತು. ನೆಮ್ಮದಿಯಾದ, ಸಂತೋಷಮಯ ಜೀವನ ನಮ್ಮದಾಯಿತು. ಕನಸುಗಳ ಹಾದಿಯಲ್ಲೇ ಜೀವನ ಸಾಗಿ ಬಂತು.      
                                                                                                                           -ಜಿ.ಕೆ.      

Wednesday, June 11, 2014

Short Love Story

ಮಧುರವಾದ ಪ್ರೇಮ 


     ನಾವೆಲ್ಲರು ಒಂದೇ ಕಾಲೇಜು. ಒಂದೇ ಕ್ಲಾಸು. ಯಾವಾಗಲೂ ಜೊತೆಯಾಗಿ ಇರುತ್ತಿದ್ದೆವು. ಕೆಲವು ಬಾರಿ ಸುಮ ಮಾತ್ರ ನನ್ನೊಟ್ಟಿಗೆ ಇರುತ್ತಿದ್ದಳು. ಉಳಿದವರು ಎಲ್ಲಾ ಹೋದರು ಅವಳು ಮಾತ್ರ ನನ್ನೊಂದಿಗೆ ಸ್ವಲ್ಪ ಕಾಲ ಹೆಚ್ಚಾಗಿ ಕಳೆದು ನಂತರ ಗೂಡು ಸೇರುತ್ತಿದ್ದಳು.

     ನಮ್ಮ ಕೋರ್ಸು ಕಂಪ್ಲೀಟ್ ಆಗುವ ಸಮಯ ಬಂದಿತ್ತು. ಎಲ್ಲರೂ ಒಲ್ಲದ ಮನಸ್ಸಿನಿಂದ ಪರಸ್ಪರ ಬೀಳ್ಕೊಟ್ಟೆವು. ಯಾಕೋ ಏನೋ? ಸುಮ ಆ ದಿನ ನನ್ನನ್ನು ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದಳು. ನಾನು ಯಾಕೆ ಸೂಮ? ಹಾಗೆ ನೂಡುತ್ತಿದ್ದೀಯ? ಎಂದು ಕೇಳಿದೆ. ಅದಕ್ಕೆ ಅವಳು ನೀನು ಏನಾದರೂ ಹೇಳುವುದಿದೆಯಾ ಎಂದಳು?

     ಇಲ್ಲ! ಏನು ಹೇಳಬೇಕು? ಎಂದು ಮರು ಪ್ರಶ್ನೆ ಮಾಡಿದೆ. ಏನಿಲ್ಲ ಬಿಡು. ಎಂದು ಅಲ್ಲಿಂದ ತೆರಳಿದಳು. ಅವಳು ಹೋದ ಮರು ಕ್ಷಣದಿಂದ ಹೃದಯ ಬಲು ಭಾರ ಎನ್ನಿಸ ತೊಡಗಿತು. ಏನನ್ನೋ ಕಳೆದುಕೊಂಡ ಭಾವನೆ. ಮನಸ್ಸಿಗೆ ಮಂಕು ಕವಿದ ಹಾಗಿತ್ತು. ಜೀವನವೇ ಬೇಸರವಾಗಿ ಎಲ್ಲಾದರೂ ದೂರ ಹೋಗಿ ಬರೋಣ ಎನಿಸುತ್ತಿತ್ತು.

     ಹೀಗಿರುವಾಗ ಒಂದು ದಿನ ಸುಮ ಬಸ್ ಸ್ಟಾಪ್ನಲ್ಲಿ ಸಿಕ್ಕಿದಳು. ಅವಳನ್ನು ಕಂಡ ಕೂಡಲೇ ಹೃದಯದ ಬಡಿತ ಹೆಚ್ಚಾಗ ತೊಡಗಿತು. ಕಳೆದುಕೊಂಡಿದ್ದನ್ನೆಲ್ಲಾ ಪುನಹ ಪಡೆದಂತೆ ಭಾಸವಾಯಿತು. ಎಂದೂ ಕೇಳಿರದ ಧನಿಯೊಂದು ಎದೆಯಲ್ಲಿ ಝೇಂಕರಿಸಿದ ಅನುಭವ. ಆಗಲೇ ನೋಡಿ ತಿಳಿದದ್ದು ನಾನು ಅವಳನ್ನು ಮನಸಾರೆ ಪ್ರೀತಿಸುತ್ತಿದ್ದೆ ಎಂಬ ವಿಷಯ.

     ನನೋಳಗಡೆ ಅಡಗಿದ್ದ ಪ್ರೀತಿ ಘೋಚರಿಸುವುದಕ್ಕೆ ಇಷ್ಟು ಕಾಲ ಬೇಕಿತ್ತು. ಅವಳಾದರೂ ಹೇಳ ಬಹುದಿತ್ತು. ಹೆಣ್ಣು ಜೀವ ಹೇಗೆ ಧೈರ್ಯ ಮಾಡಿಯಾಳು? ಎಂದು ಯೋಚಿಸಿ ನಾನೇ ಹೇಳಿ ಬಿಟ್ಟೆ. ಹೇಳಿದ ಕೂಡಲೆ ಅವಳಲ್ಲಿ ಎಂದೂ ನೋಡಿರದ ನಾಚಿಕೆಯನ್ನು ಕಂಡು ಅವಳು ಸಮ್ಮತಿಸಿರುವುದಾಗಿ ತಿಳಿಯಿತು. ಅಂದಿನಿಂದ ಆರಂಭವಾಯಿತು ನೋಡಿ ನಮ್ಮಿಬ್ಬರ ಮಧುರವಾದ ಪ್ರೇಮ.      
                                                                                                                               -ಜಿ.ಕೆ. 

Tuesday, June 10, 2014

Love Story

ನೆನಪುಗಳ ಮಾತೆ ಮಧುರ... 


     ನೆನಪುಗಳ ಮಾತೆ ಮಧುರ... ಮನಸ್ಸಿನಲ್ಲಿ ಪಿಸುಗುದುತ್ತಿರುವ ನನ್ನಿಯನ ನೆನಪಲ್ಲದೆ ಮತ್ತೇನು ಇಲ್ಲ ಈ ಹೃದಯದಲ್ಲಿ. ಆ ನೆನಪುಗಳ ಮಳಿಗೆಯಲ್ಲಿ ಇರುವುದು ಅವನೆ. ಅವನನ್ನು ಬಿಟ್ಟು ಮತ್ತೇನೂ ಇಲ್ಲ. 

     ಒಂದು ವರ್ಷದ ಕೆಳಗೆ ನಮ್ಮಿಬ್ಬರ ಪರಿಚಯವಾಯಿತು. ಪರಿಚಯದಿಂದ ಸ್ನೇಹ, ಸ್ನೇಹದಿಂದ ಪ್ರೀತಿಯಾಗಿ ಪರಿವರ್ತನೆಯಾಯಿತು. ಅವನಲ್ಲಿದ್ದ ಯಾವುದೋ ಒಂದು ಸೆಳೆತ ನನ್ನನ್ನು ಬಲವಾಗಿ ಆಕರ್ಷಿಸಿತ್ತು. ನಾನು ಸಂಪೂರ್ಣವಾಗಿ ನನ್ನನ್ನು ಅವನಿಗೆ ಅರ್ಪಿಸಿಕೊಂಡಿದ್ದೆ. ಈಗಿರುವಾಗ ಒಂದು ದಿನ ಪ್ರಶಾಂತವಾಗಿದ್ದ ನಮ್ಮಿಬ್ಬರ ನಡುವೆ ಬಿರುಗಾಳಿಯಂತೆ ಕೆಲಸದ ಅವಕಾಶವೊಂದು ಅವನನ್ನು ಹುಡುಕಿಕೊಂಡು  ಬಂದಿತು. ಆ ಕೆಲಸಕ್ಕಾಗಿ ಅವನು ದೂರದ ದೆಹಲಿಗೆ ತೆರಳಿದ್ದಾನೆ ಅವನಿಲ್ಲದೆ ನಾನು ನಿರ್ಜೀವ ಬೊಂಬೆಯಂತಿದ್ದೀನಿ. ಅವನ ನೆನಪುಗಳನ್ನೇ ಮೆಲುಕು ಹಾಕುತ್ತಾ ಅವನ ಆಗಮನದ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ. 

     ಅದೇಕೋ ಆ ದೇವರಿಗೆ ನಮ್ಮ ಮೇಲೆ ಇನ್ನೂ ಕರುಣೆ ಬಂದಿಲ್ಲ. ಅವನು ಯಾವಾಗ ಊರಿಗೆ ಹಿಂದಿರುಗುತ್ತಾನೋ? ಯಾವಾಗ ನನ್ನನ್ನು ಲಘ್ನವಾಗುತ್ತಾನೋ? ಯಾವುದು ತಿಳಿಯದೆ ಆತಂಕದಲ್ಲೇ ಬದುಕು ಸಾಗುತ್ತಿದೆ. ಅವನು ಹಿಂದಿರುಗಿ ಬರುವ ತನಕ ಅವನ ಜೊತೆ ಕಳೆದ ನೆನಪುಗಳೇ ನನ್ನ ಸಂಗಾತಿ. ಆ ನೆನಪುಗಳೊಂದಿಗೆ ನನ್ನ  ಜೀವನ ಸಾಗುತ್ತಿದೆ. ಆ ನೆನಪುಗಳೇ ಅತಿ ಮಧುರವಾಗಿ ನನ್ನನ್ನು ಸಂತೈಸುತ್ತಿದೆ.
                                                                                                                              -ಜಿ.ಕೆ. 

Sunday, June 8, 2014

GK poetry


Jokes


ಗುಂಡ : ಸುಂದರಿ ಮದುವೆಗೆ ಮುಂಚೆ ನಿನಗೆ ಬೇರೆ ಹುಡುಗರ ಗೆಳೆತನವಿತ್ತೆ ?
ಸುಂದರಿ : ಮೌನವಾಗಿದ್ದಳು. 
ಗುಂಡ : 'ಹೇಳು ಪರವಾಗಿಲ್ಲ. ನಾನು ತಪ್ಪು ತಿಳಿಯೊಲ್ಲ'
ಸುಂದರಿ : 'ತಡೀರಿ, ಲೆಕ್ಕ ತಪ್ಪಿಸ ಬೇಡಿ. ಎಣಿಸ್ತಾ ಇದ್ದೀನಿ' ಎಂದಳು. 

**********

ರಾಮ : 'ಪರವಾಗಿಲ್ಲಯ್ಯ ವಿಶ್ವ, ನಿಮ್ಮ ಅತ್ತೆ ಬಾಯಿ ತೆರೆದು ಮಾತಾಡ್ತಾರೆ'
ವಿಶ್ವ : 'ಉಳಿದವರು ಹೇಗೆ ಮಾತಾಡ್ತಾರೇ ನಿನ್ನ ಪ್ರಕಾರ?'