Wednesday, February 26, 2014

ಸವಿ ನೆನಪು

   
     ಅಂದು ಹುಡುಗಿ ನೂಡುವ ಶಾಸ್ತ್ರ. ಮನಸ್ಸಿನಲ್ಲಿ ಏನೋ ಒಂದು ರೀತಿಯ ಸಡಗರ, ಸಂಬ್ರಮ. ಮೊದಲ ಬಾರಿಗೆ ಹುಡುಗಿ ನೋಡುವ ಶಾಸ್ತ್ರದಲ್ಲೆ, ಪಾಯಸಕ್ಕೆ ತುಪ್ಪ ಬಡಿಸುವಾಗಲೇ ನನ್ನಿನಿಯನಿಗೆ ಮನಸು ಕೊಟ್ಟುವಳು ನಾನು. ಅಂದಿನಿಂದ ಯಾವಾಗ ನಮ್ಮಿಬ್ಬರ ನಿಶ್ಚಿತಾರ್ಥ ನಡೆಯುತ್ತದೆ, ಮಾತನಾಡಲು ಲೈಸೆನ್ಸ್ ಯಾವಾಗ ಸಿಗಬಹುದೆಂದು ಕಾದಿದ್ದ ಕಷ್ಟ ನಮಗೆ ಗೊತ್ತು. ಎಂಗೇಜ್‌ಮೆಂಟ್ ಮುಗಿದು ಮದುವೆ ದಿನಾಂಕ ಗೊತ್ತಾಗುತ್ತಿದ್ದಂತೆ ಆದ ಖುಷಿ ಅಷ್ಟಿಷ್ಟಲ್ಲ. ಆದರೂ ಎಂಗೇಜ್‌ಮೆಂಟ್ ದಿನ ಚೆಂದವಾಗಿ ಕೈ ಹಿಡಿದು ಉಂಗುರ ತೊಡಸದೆ, ಬೆರಳ ತುದಿಯಲ್ಲಿ ಅರ್ಧಕ್ಕೆ ಉಂಗುರವನ್ನು ಬಿಟ್ಟು ನೀನೇ ಹಾಕಿಕೋ ಎಂದಿದ್ದಕ್ಕೆ ಕೋಪಗೊಂಡ ಅವನು ಮದುವೆಯಾಗಲಿ ಆಮೇಲೆ ನೋಡಿಕೊಳ್ಳುತ್ತೇನೆ ಎಂದು ಧಮಕಿ ಹಾಕಿದ್ದ. ಆಮೇಲೆ ಅಪರೂಪಕ್ಕೊಮ್ಮೆ ಸಿಗುತ್ತಿದ್ದ. ನಮ್ಮೂರ ಜಾತ್ರೆಯಲ್ಲಿ ಹಿಂದಿಂದೆ ಸುತ್ತಿದ್ದ, ಸಣ್ಣಗೆ ಕಣ್ಣು ಹೊಡೆದಿದ್ದ ಅವನ ತುಂಟಾಟಗಳು ನನಗೆ ಇನ್ನೂ ಇಷ್ಟವಾಗಿದ್ದವು.

     ಮದುವೆ ದಿನ ಬಂದೇ ಬಿಡ್ತು. ನಮ್ಮ ಮದುವೆ ಅಪ್ಪಟ ಹಳ್ಳಿಯ ಸಂಪ್ರದಾಯದಲ್ಲಿ ನಡೆಯಿತು. ಬಾಳೆಗಿಡದ ಮಂಟಪ, ಮನೆತುಂಬ ಮಾವಿನ ತೋರಣ, ಕಬ್ಬು, ಹೂವುಗಳಿಂದ ಶೃಂಗರಿಸಲಾಗಿತ್ತು. ಶಾಸ್ತ್ರಗಳು ಸ್ವಲ್ಪ ಜಾಸ್ತಿಯಾಗೇ ಇತ್ತು. ಸಂಜೆಯಾಗುವ ಹೊತ್ತಿಗೆ ಮದುವೆಯ ಸುಸ್ತು ಮೈಮನ ಆವರಿಸಿತ್ತು. ಯಾವಾಗ ರಾತ್ರಿ ಊಟ ಹಾಕುತ್ತಾರೆ, ನಿದ್ದೆ ಮಾಡುತ್ತೇನೋ ಎಂದು ಕಾಯುತ್ತಿದ್ದೆ. ರಾತ್ರಿ ವೀಳ್ಯದೆಲೆ ಆಟ, ಕುಂಕುಮದ ನೀರಿನಲ್ಲಿ ಉಂಗುರ ಹುಡುಕುವ ಆಟಗಳನ್ನು ಆಡಿಸುತ್ತಿದ್ದರು. ಕೆಂಪಗಿದ್ದ ಆ ತಣ್ಣನೆಯ ನೀರಿನಲ್ಲಿ ಆಗಾಗ ಸುಮ್ಮನೆ ಕೈ ಹಿಡಿದು ಬಿಡುತ್ತಿದ್ದ ಅವನ ಸ್ಪರ್ಶ ನನ್ನನ್ನು ಎಚ್ಚರಿಸುತ್ತಿತ್ತು.

     ಶಾಸ್ತ್ರವೆಲ್ಲ ಮುಗಿದು, ನಾನು ರೂಮಿಗೆ ಕಾಲಿಡಬೇಕು ಅಂತ ಬಾಗಿಲು ತೆರೆದಿದ್ದಷ್ಟೇ ರೂಮಿನಲ್ಲಿ ಅವರು ಗೆಳೆಯರೊಂದಿಗೆ ತಮಾಷೆ ಮಾಡುತ್ತಿದ್ದನ್ನು ನೋಡಿದೆ. ನನ್ನನ್ನು ಕಂಡ ಕೂಡಲೇ ಅವರ ಸ್ನೇಹಿತರೆಲ್ಲರೂ ಹೊರಗೆ ಹೋದರು. ನನ್ನ ಆಯಾಸವನ್ನು ಕಂಡು ನನಗೆ ಸ್ವಲ್ಪ ರೇಗಿಸಿ, ನಂತರ ಮಲಗಿದರು. 

     ಮಾದುವೆ ಆದ್ದದ್ದಷ್ಟೇ ಅವರ ಜೊತೆ ಕಳೆದ ದಿನವೆಲ್ಲ ಸಂತಸದಿಂದಿತ್ತು. ಯಾವ ದಿನವು ಬೀಸರ ಎನ್ನಿಸಲಿಲ್ಲ. ಆಗಾಗ ಜಗಳ ಆಡಿದರು ಅದು ಖುಷಿಯಾಗಿಯೇ ಅಂತ್ಯವಾಗುತ್ತಿತ್ತು. ಸರಸ ವಿರಸಗಳ ನಡುವೆಯೆ ಜೀವನ ಸಾಗಿ ಬಂತು. ಹೇಗೋ ಎನೋ ಆತನ ಜತೆಗೆ ಕಳೆದ ದಿನಗಳೆಲ್ಲ ಖುಷಿಖುಷಿಯದ್ದೇ ಆಗಿತ್ತು . ಹತ್ತು ವರ್ಷಗಳು ಹೇಗೆ ಹುರುಳಿತು ಎಂದು ಈಗಲು ಸಂದೇಹವಾಗುತ್ತದೆ.  
                                                                                                                  - ಜಿ.ಕೆ. 

No comments:

Post a Comment